invitation for event on 26th Jan 2016

‘ಶಾರದಾ ಗುರುಕುಲ’ದ ವತಿಯಿಂದ 26-1-16, ಮಂಗಳವಾರದಂದು ಬೆಳಿಗ್ಗೆ ಸಂಭ್ರಮದ ಭಜನ-ಸತ್ಸಂಗ ಏರ್ಪಾಡಾಗಿದ್ದು, ಎಲ್ಲ ಸದಸ್ಯರಿಗೂ ಅಭಿಮಾನಿಗಳಿಗೂ ಆದರದ ಆಹ್ವಾನ!
ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮ, ಯಲಹಂಕ ನ್ಯೂ ಟೌನ್, ಇಲ್ಲಿನ ಸ್ಥಾಪಕ-ಅಧ್ಯಕ್ಷರೂ, ‘ಶಾರದಾ ಗುರುಕುಲ’ದ ಪ್ರೀತಿಪಾತ್ರರೂ ಆದ ಪೂಜ್ಯ ಸ್ವಾಮಿ ಅಭಯಾನಂದಜೀ ಮಹಾರಾಜರು ಆಗಮಿಸಿ, ಪ್ರವಚನ ನೀಡಲಿದ್ದಾರೆ.
ಒಟ್ಟು 2 ಗಂಟೆ ಕಾಲ ಭಜನೆ-ಸಂಕೀರ್ತನೆ ನಡೆಯಲಿದ್ದು, ‘ಗುರುಕುಲ’ದ ವಿವಿಧ ಉಪ-ತಂಡಗಳ ಸದಸ್ಯರು ತಾವು ಅಭ್ಯಾಸ ಮಾಡಿರುವ ಕೆಲವು ಸುಂದರ ಗೀತೆಗಳನ್ನು ನಿವೇದಿಸಲಿದ್ದಾರೆ.
ಶ್ರೇಷ್ಠ ಉಪನ್ಯಾಸಕ-ಲೇಖಕ-ಕವಿ ಡಾ|| ಹೆಚ್.ಎನ್. ಮುರಳೀಧರ ಅವರು ಅನುವಾದಿಸಿರುವ ಸ್ವಾಮಿ ವಿವೇಕಾನಂದರ ಕವಿತೆಗಳ ಸಂಗ್ರಹ ‘ಹಾಡು ಚಾಗಿಯ ಹಾಡನು…’ ಗ್ರಂಥವನ್ನು ಈ ಸುಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ.
ಹಾಗೆಯೇ, ‘ಗುರುಕುಲ’ದ ಹೆಮ್ಮೆಯ ಕಾಣಿಕೆ ‘ಮಧುರ ರಾಮನಾಮ’ ಸಿ.ಡಿ. ಜೋಡಿಯ MP3 ಆವೃತ್ತಿಯನ್ನೂ ಸಮರ್ಪಿಸಲಾಗುತ್ತದೆ.
ಈ ವಿಶೇಷ ಸತ್ಸಂಗದಲ್ಲಿ ಪಾಲ್ಗೊಂಡು, ಅನ್ನಪ್ರಸಾದವನ್ನೂ ಸ್ವೀಕರಿಸಬೇಕೆಂದು ಸಹೃದಯ ಬಂಧುಗಳೆಲ್ಲರಲ್ಲಿ ಕೋರಿಕೆ.

invitation for event on 26th Jan 2016

Leave a Reply

Your email address will not be published. Required fields are marked *

Scroll to top